Tuesday, 3 January 2023

karagalanetti poorna hrudayadinda










ಕರಗಳನ್ನೆತ್ತಿ ಪೂರ್ಣ ಹೃದಯದಿಂದ  ನಿತ್ಯವೂ  ಆರಾಧಿಸುವೆ ಮೊಣಕಾಲೂರಿ ನಿನ್ನ ಶ್ರೇಷ್ಠ ನಾಮವ  ಎಂದೆಂದಿಗೂ ಆರಾಧಿಸುವೇ /2/ ಆರಾಧಿಸುವೆ ನಿನ್ನ ಆರಾಧಿಸುವೇ ನಿನ್ನ ಆರಾಧಿಸುವೆ ನಿನ್ನ ಯೇಸುವೆ, ಸ್ತುತಿಗೆ ಯೋಗ್ಯನು ನೀನೇ ಮಹಿಮೆಗೆ ಪಾತ್ರನು ನೀನೇ ನನ್ನಯ ಕರ್ತನೆ ಯೇಸುವೇ. //ಕರಗಳ// 1. ಪಾಪವಿಲ್ಲದ ನೀನು  ಪಾಪದಿಂದ ನನ್ನ ಬಿಡಿಸಲು ದಂಡನೆಯ ಹೊತ್ತುಕೊಂಡೇ, ಮಗನಾಗಿ ಮಾಡಿಕೊಂಡೆ.//2// ನಿನ್ ಪ್ರತಿರಕ್ತ ಕಣದಲ್ಲೂ ನನ್ ರೂಪ ಇರಿಸಿರುವೆ ನಿನ್ ಜೀವದಲ್ಲೇ ನನ್ನ ಹುದುಗಿಸಿದೆ. //2// 2. ಕಣ್ಣೀರ ಸಮಯದಲ್ಲಿ ಕಣ್ಣೀರ ಒರೆಸಿರುವೆ ಯಾರು ಇಲ್ಲ ಅನ್ನಿಸುವಾಗ   ಕದಲದೇ ಜೊತೆಗಿರುವೆ.//2// ಸೋತು ಹೋದ ಸಮಯವೆಲ್ಲ ನನ್ನನ್ನು ಬಲಪಡಿಸಿ ಕರಹಿಡಿದು ಕಣ್ಮಣಿಯಂತೆ ಕಾದಿರುವೆ. //2// 3. ಬರಿದಾದ ಈ ಬಾಳನ್ನು ಕೃಪೆಗಳಿಂದ ಶೃಂಗರಿಸಿರುವೆ ನಕ್ಕವರ ಮುಂದೆಯೇ ಘನವಾಗಿ ಇಟ್ಟಿರುವೆ//2// ಮಣ್ಣಾದ ನನ್ನನ್ನು  ಬಂಗಾರ ಮಾಡಿರುವೆ ನಿನ್ನಂತೆ ಪ್ರೀತಿಸಲು ಯಾರು ಇಲ್ಲ.//2//



No comments:

Post a Comment

nine dayeyalli bin krupeyalli