ನೀವೆಷ್ಟು ಒಳ್ಳೆವ್ರಪ್ಪಾ ನಿನ್ ಪ್ರೀತಿ ಹೇಗೇಳಲಪ್ಪ
ನೀವೆಷ್ಟು ಒಳ್ಳೆವ್ರಪ್ಪಾ ನಿನ್ ಪ್ರೀತಿ ಹೇಗೇಳಲಪ್ಪ -2 ಈ ಹಾಡು ನಿನಗಾಗಿಯೇ ಹಾಡುವೆನು ನನ್ನೇಸುವೆ -2 ನನ್ನ ಒಳ್ಳೆ ಪಾಲು ನೀ ಯೇಸಯ್ಯಾ ನಿನಗಿಂತ ದೇವರು ಬೇರಿಲ್ಲಯಾ -2 ನಿನ್ನ ಪಾದಕೆ ಮುದ್ದಿಡುವೆ ನಿನ್ನನ್ನೆ ಪ್ರೀತಿಸುವೆ -2 ಜೀವನವೆಲ್ಲಾ ನಿನಗಾಗಿ ಹಾಡಿ ಹೊಗಳುವೆ -2 ಈ ನನ್ನ ಜೀವ ನಿನ್ನದೇಸಯ್ಯಾ ಉಸಿರೆಲ್ಲಾ ನಿನ್ನದೆ ಓ ಯೇಸಯ್ಯಾ -2 ನೀನಿರದ ಒಂದು ಕ್ಷಣ ಬದುಕೆಲ್ಲಾ ಬರಿ ಶೂನ್ಯ -2 ನೀನಿರಲು ಬಾಳೆಲ್ಲಾ ಹರುಷಾನಂದ -2 ಪರಲೋಕವೆಲ್ಲಾ ನಿನ್ನದೇಸಯ್ಯಾ ನಾನು ಕೂಡ ಅಲ್ಲಿಗೆ ಬರುವೇನಯ್ಯಾ -2 ಬೇಗನೆ ಬರಲಿರುವೆ ಕೈ ಹಿಡಿದು ಕರೆದೊಯ್ಯುವೆ -2 ಶಾಶ್ವತ ಸ್ಧಾನದಿ ನನ್ನನ್ನು ನೀನೇ ನಿಲ್ಲಿಸುವೆ -2
No comments:
Post a Comment