Wednesday, 4 January 2023

ninna nenesuvagalella ನಿನ್ನ ನೆನೆಸುವಾಗಲೆಲ್ಲಾ ನನ್ ಹೃದಯ ಹೇಳ್ವದು

 

                                    ನಿನ್ನ ನೆನೆಸುವಾಗಲೆಲ್ಲಾ ನನ್ ಹೃದಯ ಹೇಳ್ವದು



 


 

ನಿನ್ನ ನೆನೆಸುವಾಗಲೆಲ್ಲಾ ನನ್ ಹೃದಯ ಹೇಳ್ವದು
ನಿ ಉನ್ನತನೆಂದು
ನಿನ್ನ ಹಾಡುವಾಗಲೆಲ್ಲಾ ನನ್ ಹೃದಯ ಹೇಳ್ವದು
ನಿ ಪರಿಶುದ್ಧನೆಂದು
ಆರಾಧನೆ ನಿಮಗೆ ಆರಾಧನೆ

 

1.ಹಾಡುಗಳು ತಂದೆ ನನ್ನ ಬಾಯಲ್ಲಿ
ಹಾಡುವಾಗಲೆಲ್ಲಾ ಸಂತೋಷಿಸುವೆ
ಧೂಳೀಯಾದೆ ನನ್ನ ಮೇಲೆತ್ತಿದೆ ಯೇಸಪ್ಪ
ಪ್ರಭುಗಳೊಂದಿಗೆ ಕೂಡಿಸಿದೆ – ಆರಾಧನೆ

 

2.ನಿನಗಾಗಿ ನಾ ಸಾಕ್ಷಿಯಾಗಿ ಬಾಳಲು
ದೇವರೆ ನನ್ನನ್ನು ಆರಿಸಿದೆ
ಜೀವಿಸುವ ದಿನವೆಲ್ಲಾ ಹಾಡುವೆ
ನಿನ್ನನ್ನೆ ಮುಂದಿಟ್ಟು ಓಡುವೆ – ಆರಾಧನೆ

 

3.ಹುಟ್ಟಿದ ದಿನದಿಂದ ಈ ದಿನದವರೆಗೂ
ನಿನ್ನನ್ನೆ ನಾ ಆತುಕೊಂಡೆ
ನಿನ್ ಸ್ತೋತ್ರವಲ್ಲದೆ ಬೇರೆ ಯಾವುದು 
ನನ್ನ ಬಾಯಲ್ಲಿ ಇಲ್ಲ ಯೇಸಯ್ಯ – ಆರಾಧನೆ

No comments:

Post a Comment

nine dayeyalli bin krupeyalli